ಆಕೆ ಪ್ರಸಿದ್ಧ ಲೇಖಕಿ. ಆಕೆಯ ಸಂವೇದನಾಶೀಲ ಕಥೆಗಳಿಂದ ಜನಪ್ರಿಯತೆಯ ಉತ್ತುಂಗಕ್ಕೇರಿದವಳು. ಆಕೆಯ ಪತಿಗೆ ಕಥೆಗಳನ್ನು ಓದುವ ಹವ್ಯಾಸವಿಲ್ಲ .ಪತಿಯ ಪ್ರಶಂಸೆಯ ಆಸೆಯಿಂದ ಒಂದು ದಿನ ಒತ್ತಾಯಪೂರ್ವಕವಾಗಿ ತೋರಿಸಿದಳು. ಮೊದಲು ಬಲವಂತಕ್ಕಾಗಿ ಓದಿದ ಆತ ನಂತರ ಕಥೆಯ ಪಾತ್ರಗಳಲ್ಲಿ ಅವಳ ಇರುವಿಕೆಯನ್ನು ಹುಡುಕತೊಡಗಿದ . ಈಗ ಲೇಖಕಿ ಕಥೆಯಾಗಿ ಹೋಗಿದ್ದಾಳೆ.
ಜನಮನದ ಉತ್ತುಂಗಕ್ಕೇರಿದ ಆತನ ಕೀರ್ತಿ ತಾನೇ ಶ್ರೇಷ್ಟನೆಂಬ ಅಹಂಭಾವಕ್ಕೆ ಬಲಿಯಾಯಿತು.
ಕತ್ತೆಲೆಯ ಕೋಣೆಯಲ್ಲಿ ಆತ ಬೆಳಕಿಗಾಗಿ ಕಾಯುತ್ತಿದ್ದ. ಕೋಣೆಯ ಹೊರಗೆ ಬೆಳಕು ಆತನಿಗಾಗಿ ಕಾಯುತ್ತಿತ್ತು.
No comments:
Post a Comment